ಕ್ವಿನೋನ್
ಕಾರ್ಬೊನಿಲ್ ಗುಂಪುಗಳ ಕಾರ್ಬನ್ ಪರಮಾಣುಗಳು ಉಂಗುರ ರಚನೆಯ ಭಾಗವಾಗಿರುವ ಆರೋಮ್ಯಾಟಿಕ್ ಡೈ ಕೀಟೋನುಗಳ ವರ್ಗದ ಸದಸ್ಯ. ಇಡೀ ಗುಂಪಿಗೇ ಕ್ವಿನೋನ್ ಎಂದು ಹೆಸರಿದೆ. ಆದರೆ ಹಲವಾರು ವೇಳೆ ಇದನ್ನು ನಿರ್ದಿಷ್ಟವಾದ ಠಿ- ಬೆಂಜೋóಕ್ವಿನೋನನ್ನು ಕುರಿತು ಮಾತ್ರ ಹೇಳುವುದುಂಟು. ಕ್ವಿನೋನುಗಳು ಬಣ್ಣವಿರುವ ವೃತ್ತಾಕಾರವುಳ್ಳ ಮತ್ತು ಎರಡು ಕಾರ್ಬೊನಿಲ್ ಗುಂಪುಗಳಿಂದ ಕೂಡಿದವುಗಳು. ಆರು ಪರಮಾಣುಗಳುಳ್ಳ ಅತೃಪ್ತ ಚಕ್ರಾಕಾರ ಆಗ್ರ್ಯಾನಿಕ್ ಸಂಯುಕ್ತಗಳಲ್ಲಿರುವ ಎರಡು ಕಾರ್ಬೊನಿಲ್ ಗುಂಪುಗಳು ಒಂದಕ್ಕೊಂದು ತಾಗಿ ಇಲ್ಲವೇ ಒಂದು ವೀನೈಲ್ ಗುಂಪಿನಿಂದ (-ಅ=ಅ-) ಬೇರ್ಪಡಿಸಲ್ಪಟ್ಟಿರುತ್ತವೆ. ಎಲ್ಲ ಕ್ವಿನೋನುಗಳಿಗೂ ಈ ಪ್ರಧಾನ ಲಕ್ಷಣಗಳು ಉಂಟು. ಆದರೆ ಆಂಫಿನಾಫ್ತಾ ಕ್ವಿನೋನ್ ಇದಕ್ಕೆ ಅಪವಾದವಾಗಿದ್ದು ಇದರಲ್ಲಿ ಎರಡು ಕಾರ್ಬೊನಿಲ್ ಗುಂಪುಗಳು ಬೇರೆ ಬೇರೆ ವರ್ತುಲಗಳಲ್ಲಿ ಇರುತ್ತವೆ (ಚಿತ್ರ 1).

ಚಿತ್ರ-1

ಕ್ವಿನೋನ್ ಪದ ಸಾಮಾನ್ಯವಾಗಿ ಪ್ಯಾರಾಬೆಂಜೋóಕ್ವಿನೋನಿಗೆ ಸಂಬಂಧಿಸಿರುತ್ತದೆ. ಆದರೆ ಆಗ್ರ್ಯಾನಿಕ್ ಸಂಯುಕ್ತಗಳಿಗೆ ಕ್ವಿನೋನನ್ನು ಹೋಲುವಂಥ ಅಣುರಚನೆ ಇದ್ದರೆ ಅವನ್ನು ಕೂಡ ಕ್ವಿನೋನುಗಳು ಎಂದು ಪರಿಗಣಿಸುತ್ತೇವೆ. 

ಚಿತ್ರ-2

ಎಲ್ಲ ಕ್ವಿನೋನುಗಳ ರಾಸಾಯನಿಕ ಗುಣಲಕ್ಷಣಗಳು ಪ್ಯಾರಾಬೆಂಜೋó ಕ್ವಿನೋನಿನ ರಾಸಾಯನಿಕ ಗುಣಲಕ್ಷಣಗಳನ್ನು ಹೋಲುತ್ತವೆ. ಮತ್ತು ಎಲ್ಲ ಕ್ವಿನೋನುಗಳಿಗೆ ಕ್ವಿನೋನೈಡ್ ರಚನೆ ಇರುತ್ತದೆ. ಅಪಕರ್ಷಿಸಿದಾದ ಕ್ವಿನೋನುಗಳು ಕ್ವಿನಾಲುಗಳಾಗಿ ಪರಿವರ್ತನೆಗೊಳ್ಳುತ್ತವೆ. ಈ ಕ್ವಿನೋಲುಗಳಿಗೆ ಬೆಂಜಿóನೈಡ್ ರಚನೆ ಇರುವುದು. 
 				(ಎಲ್.ಡಿ.ಎಂ.)